Index   ವಚನ - 3    Search  
 
ಗುರು ಭಕ್ತನಲ್ಲ, ವಿರಕ್ತನಲ್ಲ, ನಿಶ್ಚಿಂತೆಯಲ್ಲ, ದುಶ್ಚಿಂತೆಯಲ್ಲ, ದಿಟವೆಂಬುದಿಲ್ಲ, ಡಂಬುಳದೆಲ್ಲಾ, ಏನೆಂಬೆ! ಎನ್ನ ಮನವೆಯ್ದೆ ಹೊಲ್ಲ. ಎನಗೊಡೆಯರಿಲ್ಲ, ನಿಮ್ಮ ಬಿಡುವುದಿಲ್ಲ, ಸದ್ಗುರುವೆ ನೀ ಕರುಣಿಸು ಪುರದ ಮಲ್ಲಯ್ಯಾ.