Index   ವಚನ - 3    Search  
 
ಮೋನವೇನೊ ಮೂಲಮಂತ್ರ ಮುಖದಲ್ಲಿರಲು? ಆಹ್ವಾನವೇನೊ ನಿಜ ಪರಿಪೂರ್ಣ ತನ್ನೊಳಗಿರಲು ಧ್ಯಾನವೇನೊ ಸಹಜಧ್ಯಾನದ ಬೆಳಗೊಳಗೊಂಡವಂಗೆ? ಜಪವೆಂದೇನೊ ತಾನು ತಾನಾದವಂಗೆ ಬಯಲನರಸುವ ಮರುಳರಂತೆ ಗುರುಬಸವ.