ಶ್ವೇತ ಪೀತ ಕಪೋತ ಹರಿತ ಕೃಷ್ಣ ಮಾಂಜಿಷ್ಟವೆಂಬ
ಷಡುವರ್ಣವೆಂದೆನ್ನ.
ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯೆಂದೆನ್ನ.
ಲಿಂಗವಿಂತುಟೆನ್ನ, ಲಿಂಗೈಕ್ಯವಿಂತುಟೆದು ನುಡಿಯ.
ಅಭಂಗನ ನಿಲವ ಭಂಗಿತರೆತ್ತ ಬಲ್ಲರು ಗುಹೇಶ್ವರಾ.
Transliteration Śvēta pīta kapōta harita kr̥ṣṇa mān̄jiṣṭavemba
ṣaḍuvarṇavendenna.
Uṇḍu upavāsi baḷasi brahmacāriyendenna.
Liṅgavintuṭenna, liṅgaikyavintuṭedu nuḍiya.
Abhaṅgana nilava bhaṅgitaretta ballaru guhēśvarā.
Hindi Translation ३वेत-पीत कपोत- हरित-कृष्ण-मंजिष्ट जैसे षड्वर्ण कहना,
खाकर उपवासी, भोग कर ब्रह्मचारी कहना,
लींग ऐसा है कहना, लिंगैक्य की बोली ।
अभंग की स्थिति भंगित कैसे जानते गुहेश्वरा?
Translated by: Banakara K Gowdappa
Translated by: Eswara Sharma M and Govindarao B N
Tamil Translation மஞ்சள், வெண்மை, சாம்பல், பச்சை, மாணிக்கம்
சிகப்பு எனும் ஆறு நிறம் குறித்து பகர்வரோ?
உண்டும் உண்ணாதவன், துய்த்தும் பிரம்மச்சாரி என்னான்
இலிங்கம் இத்தன்மைத் தென்னான். ஒருமித்ததைக் கூறான்.
மெய்ப்பொருளின் நிலையை உலகியலோர் உரைக்க வல்லரோ?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಭಂಗ = ಅವಿನಾಶಿ; ಇಂತುಟು = ಹೀಗಿದೆ, ಇಷ್ಟಿದೆ; ಎಂದು = ಎಂದು; ಎನ್ನ = ಎನ್ನುವುದಿಲ್ಲ, ಎನ್ನಲಾರ; ಎನ್ನ = ಎನ್ನುವುದಿಲ್ಲ; ಕಪೋತ = ಬೂದುವರ್ಣ; ವಿಶುದ್ದಿಚಕ್ರ; ಕೃಷ್ಣ = ಅಗ್ನಿವರ್ಣ, ಮಾಣಿಕ್ಯವರ್ಣ; ಆಜ್ಞಾಚಕ್ರ; ನಿಲುವು = ಸ್ವರೂಪ; ಪೀತ = ಹಳದಿ ವರ್ಣ; ಆಧಾರಚಕ್ರ; ಭಂಗಿತರು = ವಿನಾಶಶೀಲ ಭೋಗೋಪಭೋಗದಲ್ಲಿ ಆಸಕ್ತರಾದ ಲೌಕಿಕರು; ಮಾಂಜಿಷ್ಟ = ಕೆಂಪು ವರ್ಣ; ಅನಾಹತಚಕ್ರ; ಲಿಂಗವು = ಚಿದ್ಘನಲಿಂಗವು; ಲಿಂಗೈಕ್ಯ = ಲಿಂಗದೊಂದಿಗೆ ಸಾಮರಸ್ಯ; ಶ್ವೇತ = ಶುಭ್ರವರ್ಣ; ಸ್ವಾಧಿಷ್ಠಾನ ಚಕ್ರ; ಷಡುವರ್ಣವು = ಷಡ್ವರ್ಣದ ಷಟ್ ಚಕ್ರಗಳನೇರಿದ ಅನುಭವಿಯು ನಾನು; ಹರಿತ = ಹಸಿರು ವರ್ಣ; ಮಣಿಪೂರಕ ಚಕ್ರ;
Written by: Sri Siddeswara Swamiji, Vijayapura