ಅರೆಯ ಮೇಲಣ ಹುಲ್ಲೆಗೆ ಕೆಂಗರಿಯ ಬಾಣವ ತೊಟ್ಟವನೆ,
ತಪ್ಪದೆ ತಾಗಿತ್ತಲ್ಲಾ! ಅದು ಒಂದೆ ಬಾಣದಲ್ಲಿ ಅಳಿಯಿತ್ತಲ್ಲಾ!
ನಾರಿ ಹರಿಯಿತ್ತು, ಬಿಲ್ಲು ಮುರಿಯಿತ್ತು.
ಹುಲ್ಲೆ ಎತ್ತ ಹೋಯಿತ್ತು ಗುಹೇಶ್ವರಾ?
Transliteration Areya mēlaṇa hullege keṅgariya bāṇava toṭṭavane,
tappade tāgittallā! Adu onde bāṇadalli aḷiyittallā!
Nāri hariyittu, billu muriyittu.
Hulle etta hōyittu guhēśvarā?
Hindi Translation पत्थर पहाड़ पर हिरन को तीक्ष्ण बाण छोड़ा,
बिना चूखे लगा, वह एक ही बाण से मर गया!
रस्सी फटी, धनुष टूटा।
हिरन कहाँ गया गुहेश्वरा ?
Translated by: Eswara Sharma M and Govindarao B N
Tamil Translation பாறையிலுள்ள விலங்கிற்கு சிகப்பு அம்பினை எய்தவனே
தப்பாது தைத்ததன்றோ! ஒரே அம்பில் அழிந்ததன்றோ!
நாண் அறுந்தது. வில் முறிந்தது.
விலங்கு எங்கு சென்றது குஹேசுவரனே?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರೆ = ಕಲ್ಲುಗುಡ್ಡ; ಕೆಂಗರಿಯ ಬಾಣ = ಕೆಂಪಾದ ಗರಿಯುಳ್ಳ ಬಾಣ, ಶಿವೋsಹಂ ಎಂಬ ಭಾವಾನುಸಂಧಾನ; ತೊಡು = ಹೂಡು; ನಾರಿ = ಹೆದೆ, ಶುದ್ದಭಾವ; ಬಿಲ್ಲು = ಧನಸ್ಸು, ಶಿವಯೋಗಸಾಧನೆ; ಮುರಿ = ಮುರಿದುಹೋಗು(ಭಗ್ನಗೊಳ್ಳು), ಪೂರ್ಣಗೊಳ್ಳು, ಸಾರ್ಥಕವಾಗು; ಹರಿ = ಹರಿದುಹೋಗು, ನಿರ್ಭಾವಗೊಳ್ಳು; ಹುಲ್ಲೆ = ಚಿಗರೆ, ಮಾಯೆ;
Written by: Sri Siddeswara Swamiji, Vijayapura