•  
  •  
  •  
  •  
Index   ವಚನ - 559    Search  
 
ಒಕ್ಕುದ ಮಿಕ್ಕುದ ಕೊಂಬ ನಿಚ್ಚಪ್ರಸಾದಿ ನೀ ಕೇಳಾ. ಒಕ್ಕುದಾವುದು? ಮಿಕ್ಕುದಾವುದು? ಬಲ್ಲಡೆ ನೀ ಹೇಳಾ. ಒಕ್ಕು ಹೋಹುದು ಕಾಯ, ಮಿಕ್ಕು ಹೋಹುದು ಪ್ರಾಣ. ಇದು ತಕ್ಕುದೆಂದರಿದು ಕೊಳಬಲ್ಲಡೆ ಸಿಕ್ಕುವನು ನಮ್ಮ ಗುಹೇಶ್ವರನು.
Transliteration Okkuda mikkuda komba niccaprasādi nī kēḷā. Okkudāvudu? Mikkudāvudu? Ballaḍe nī hēḷā. Okku hōhudu kāya, mikku hōhudu prāṇa. Idu takkudendaridu koḷaballaḍe sikkuvanu nam'ma guhēśvaranu.
Hindi Translation दिया हुआ बचा हुआ पानेवाले निश्यल प्रसादी तुम सुनो दिया हुआ कौनसा बचा हुआ कौन सा, जाने तो कहो। दिया हुआ शरीर लिंग होता है, बचा हुआ प्राण होता है, यह योग्य समझे तोमिलेगा हमारा गुहेश्वरा । Translated by: Eswara Sharma M and Govindarao B N
Tamil Translation அளித்து எஞ்சியதை ஏற்கும் உறுதிமிக்க பிரசாதி, கேளாய், அளித்ததெது, எஞ்சியதெது, அறிவாய் எனின் நீ கூறாய் உடலை அர்ப்பிப்பாய், மனத்தை அர்ப்பிப்பாய் இது தகுந்ததென அறிந்து ஏற்க வல்லாய் எனின் நம் குஹேசுவரனை அடைவாயன்றோ Translated by: Smt. Kalyani Venkataraman, Chennai
ಶಬ್ದಾರ್ಥಗಳು ಒಕ್ಕು ಹೋಹುದು = ಒಕ್ಕಪ್ರಸಾದವಾಗಬೇಕಾದುದು; ಒಕ್ಕುದು = ಕೊಟ್ಟುದು, ನೀಡಿದುದು; ಕೊಳ್ = ಕೊಳ್ಳು, ಸ್ವೀಕರಿಸು; ತಕ್ಕುದು = ಯೋಗ್ಯವಾದುದು; ನಿಶ್ಚಲಪ್ರಸಾದಿ = ನಿಯಮಿತವಾಗಿ ತಪ್ಪದೆ ಪ್ರಸಾದವನ್ನು ಸ್ವೀಕರಿಸುವವ; ಮಿಕ್ಕು ಹೋಹುದು = ಮಿಕ್ಕ ಪ್ರಸಾದವಾಗಬೇಕಾದುದು; ಮಿಕ್ಕುದು = ಕೊಟ್ಟು, ಉಳಿದುದು, ಶೇಷವಾದುದು; Written by: Sri Siddeswara Swamiji, Vijayapura