ನೀರಿಲ್ಲದ ನೆರಳಿಲ್ಲದ ಬೇರಿಲ್ಲದ ಗಿಡ ಹುಟ್ಟಿದಡೆ
ತಲೆಯಿಲ್ಲದ ಮೃಗ ಬಂದು ಮೇಯಿತ್ತಾ ಗಿಡವ.
ಕಣ್ಣಿಲ್ಲದ ವ್ಯಾಧನು ಕಂಡನಾ ಮೃಗವ.
ಕೈಯಿಲ್ಲದ ವ್ಯಾಧನು ಎಚ್ಚನಾ ಮೃಗವ.
ಅಚ್ಚಿಲ್ಲದ ಬಂಡಿಯ ಹೂಡಿ
ಕಾಲಿಲ್ಲದ ವ್ಯಾಧನು ಹೊತ್ತನಾ ಮೃಗವ.
ಕಿಚ್ಚಿಲ್ಲದ ನಾಡಿಂಗೊಯ್ದು ಸುಟ್ಟು ಬಾಣಸವ ಮಾಡೆ
ಲಿಂಗಕ್ಕರ್ಪಿತವಾಯಿತ್ತು ಗುಹೇಶ್ವರಾ.
Transliteration Nīrillada neraḷillada bērillada giḍa huṭṭidaḍe
taleyillada mr̥ga bandu mēyittā giḍava.
Kaṇṇillada vyādhanu kaṇḍanā mr̥gava.
Kaiyillada vyādhanu eccanā mr̥gava.
Accillada baṇḍiya hūḍi
kālillada vyādhanu hottanā mr̥gava.
Kiccillada nāḍiṅgoydu suṭṭu bāṇasava māḍe
liṅgakkarpitavāyittu guhēśvarā.
Hindi Translation बिना पानी, बिना छाया, बिना जड पौधा पैदा था।
शिर रहित मृग ने आकर खाया उस पौधे को;
आँखे रहित अंधे ने देखा उस मृग को ;
हाथ रहित व्याध ने मारा उस मृग को ।
अग्नि रहित प्रांत में ले जाकर जलाकर खाना पकाया
लिंगार्पित हुआ गुहेश्वरा।
Translated by: Eswara Sharma M and Govindarao B N
Tamil Translation நீரற்ற, நிழலற்ற, வேரற்ற மரம் தோன்றியது
தலையற்ற விலங்கு அச்செடியை மேய்ந்தது;
கண்ணற்ற குருடன் அவ்விலங்கைக் கண்டனன்;
கையற்ற வேடன் அவ்விலங்கின்மீது அம்பெய்தினன்;
அமைதியான இடத்தில் சுட்டு பக்குவம் செய்து
இலிங்கத்திற்கு அர்ப்பித்தனன் குஹேசுவரனே
Translated by: Smt. Kalyani Venkataraman, Chennai
ಶಬ್ದಾರ್ಥಗಳು ಎಚ್ಚನು = ಬಾಣದಿಂದ ಹೊಡೆದನು; ಕಣ್ಣು = ಭೋಗದೃಷ್ಟಿ; ಕಿಚ್ಚಿಲ್ಲದ ನಾಡು = ಸುಶಾಂತ ನೆಲೆ, ತ್ರಿಕೂಟದಾಚೆಗಿನ ಚಂದ್ರಮಂಡಲ, ತುರೀಯ ಸ್ಥಲ, ತುರೀಯ ಸ್ಥಿತಿ; ಕುರುಡನು, ವ್ಯಾಧನು = ಭೋಗದೃಷ್ಟಿಯಿಲ್ಲದ ಹಾಗೂ ಯೋಗಸಾಧನೆಗೆ ತೊಡಗಿದ ಸಾಧಕ ಶರಣನು; ಕೈ = ಕರ್ಮಶೀಲತೆ, ಭೋಗೋಪಭೋಗದ ವಸ್ತುಗಳನ್ನು ಸಂಪಾದಿಸುವ ಕರ್ಮಗಳಲ್ಲಿ ಅಭಿರತಿ; ಗಿಡ = ವೈಷಯಿಕ ಪ್ರಪಂಚವೃಕ್ಷ; ತಲೆ ಇಲ್ಲದ = ಸುಜ್ಞಾನವಿಲ್ಲದ, ಮಾಯಾ-ಮೋಹಗಳಿಂದ ಆವೃತವಾದ; ನೀರು = ಸತ್ವ, ಸಾರ; ನೆಳಲು = ನೆಮ್ಮದಿ, ತಂಪು; ಬೇರು = ಸ್ಥಿರತೆ; ಮೃಗ = ಮನಸ್ಸು ಸಂಸಾರತಾಪಕ್ಕೆ ಒಳಗಾಯಿತು; ಮೇಯು = ವಿಷಯಗಳನು ಅನುಭವಿಸು; ಸುಟ್ಟು ಬಾಣಸವ ಮಾಡು = ಪಾಕಗೊಳಿಸು, ಮನವನು ಅ-ಮನಗೊಳಿಸು; ಹುಟ್ಟು = ಕಾಣಬರು;
Written by: Sri Siddeswara Swamiji, Vijayapura