ಗಂಗಾದೇವಿಯ ಹುಳಿಯ ಕಾಸಿ,
ಗೌರಿದೇವಿಯ ಕೂಳನಟ್ಟು,
ಭಕ್ತನ ಬಾಡನಟ್ಟು, ದೇವನ ಸಾಸವೆಗಲಸಿ,
ಬ್ರಹ್ಮನಡ್ಡಣಿಗೆ, ವಿಷ್ಣು ಪರಿಯಾಣ, ರುದ್ರನೋಗರ,
ಈಶ್ವರ ಮೇಲೋಗರ, ಸದಾಶಿವ ತುಪ್ಪ; ಪರಮೇಶ್ವರ ಬಾಯಿ
ಉಣಲಿಕ್ಕಿ ಕೈಕಾಲು ಮುರಿಯಿತ್ತು ಗುಹೇಶ್ವರಾ.
Transliteration Gaṅgādēviya huḷiya kāsi,
gauridēviya kūḷanaṭṭu,
bhaktana bāḍanaṭṭu, dēvana sāsavegalasi,
brahmanaḍḍaṇige, viṣṇu pariyāṇa, rudranōgara,
īśvara mēlōgara, sadāśiva tuppa; paramēśvara bāyi
uṇalikki kaikālu muriyittu guhēśvarā.
Hindi Translation गंगादेवी की खट्टा तपाकर, गौरी का चावल पकाकर,
भक्त की सब्जी रखकर, देव का राई डालकर ;
ब्रह्म की तिपाई, विष्णु का परियाण, रूद्र का अन्न,
ईश्वर का व्यंजन, सदाशिव का घी;
नैवेद्य करके हाथ पैर टूट गये गुहेश्वरा ।
Translated by: Banakara K Gowdappa
Translated by: Eswara Sharma M and Govindarao B N
Tamil Translation மனத்தையடக்கி, தூயமனமெனும் ரசம்செய்து
நல்லுணர்வு எனும் அன்னம் இட்டு,
பக்தனின் சிரத்தை, பக்தி எனும் காய்கறியைப்
பக்குவம் செய்து, இறைஞானத்தைத் தாளிப்பாய்.
பிரம்மன் முக்காலி, விஷ்ணு பிரசாதகலம்
உருத்திரன் அன்னம், ஈசுவரன் துணை உணவு,
சதாசிவன் நெய், இப்படையலைப் படைத்து
செயலற்றிருப்பாய், குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಡು = ಕುದಿಸು, ವಿಕಸಿತಗೊಳಿಸು; ಅಡ್ಡಣಿಗೆ = ಮೂರುಕಾಲುಗಳುಳ್ಳ ಮಣೆ; ಈಶ್ವರ = ತಿರೋಧಾನಕರ್ತ ದೇವ; ಉಣಲಿಕ್ಕು = ನಿವೇದಿಸು; ಓಗರ = ಅನ್ನ, ಸದ್ಭಾವ; ಕಲಸು = ಒಗ್ಗರಣೆ ಕೊಡು, ಹದಗೊಳಿಸು, ಸುಜ್ಞಾನವನ್ನಾಗಿಸು; ಕೂಳನು ಅಡು = ಸದ್ಭಾವರೂಪ ಅನ್ನವನ್ನು ಮಾಡು; ಕೈಕಾಲ ಮುರಿ = ಮಾಡುವ ಮತ್ತು ನಡೆಯುವ ಕ್ರಿಯೆಗಳನ್ನು ನಿಲ್ಲಿಸು, ಶಾಂತನಾಗು, ನಿರಾಮಯನಾಗು; ಗಂಗಾದೇವಿ = ಮನಸ್ಸು; ಗೌರೀದೇವಿ = ಭಾವ; ತುಪ್ಪ = ಚಿತ್ತ ಸಮಾಧಾನ; ದೇವನ ಸಾಸವೆ = ದೇವನ ಜ್ಞಾನ, ಅಂಗ-ಲಿಂಗಜ್ಞಾನ; ಪರಿಯಾಣ = ಪ್ರಸಾದ ಪಾತ್ರೆ; ಬ್ರಹ್ಮ = ಸದಾಚಾರಗಳಿಂದ ಶುದ್ದವಾದ ಸ್ಥೂಲದೇಹ; ಭಕ್ತನ ಬಾಡು = ಭಕ್ತನ ಹೃದಯದೊಳಗಿರುವ ಶ್ರದ್ದಾದಿ ಭಕ್ತಿಗಳೆಂಬ ತರಕಾರಿಗಳು; ಮೇಲೋಗರ = ವ್ಯಂಜನ; ಸುಮನ, ಸದ್ಭಕ್ತಿ ಮತ್ತು ಸುಜ್ಞಾನ; ರುದ್ರ = ಲಯಕರ್ತ ದೇವ; ವಿಷ್ಣು = ಸುನಿಯಂತ್ರಿತವಾದ ಪ್ರಾಣ; ಸದಾಶಿವ = ಅನುಗ್ರಹಕರ್ತದೇವ; ಹುಳಿಯ ಕಾಸು = ಸುಮನವೆಂಬ ಸಾರನ್ನು ಸಿದ್ದಗೊಳಿಸು;
Written by: Sri Siddeswara Swamiji, Vijayapura