Index   ವಚನ - 45    Search  
 
ಒಕ್ಕುದು ಪ್ರಸಾದವಲ್ಲ, ಮಿಕ್ಕುದು ಪ್ರಸಾದವಲ್ಲ. ಹತ್ತೆ ಕರೆದಿಕ್ಕಿದುದು ಪ್ರಸಾದವಲ್ಲ. ತರ್ಕೈಸಿ ನಿಮ್ಮುವನಪ್ಪಿಕೊಂಡಡೆ ಅದು ನಿಶ್ಚಯಪ್ರಸಾದ ಕಾಣಾ! ರಾಮನಾಥ.