•  
  •  
  •  
  •  
Index   ವಚನ - 586    Search  
 
ಭುವನ ಹದಿನಾಲ್ಕರ ಭವನದ ಕೀಲನೆ ಕಳೆದು ಉರವಣಿಸುವ ಪವನಂಗಳ ತರಹರಿಸಿ ತಡೆದಡೆ-ಅದು ಯೋಗ! ಯೋಗ ಚತುರಸದೊಳಗಣ ನಿಲವ ಕಾಣಬೇಕು. ವಜ್ರ ನೀಲದ ಹೊದಿಕೆಯಲ್ಲಿರ್ದ ಭುವನಂಗಳ ಹೊದ್ದಿ ಮಾಣಿಕವ ನುಂಗಿ ಉಗುಳದು-ಗುಹೇಶ್ವರಾ.
Transliteration Bhuvana hadinālkara bhavanada kīlane kaḷedu uravaṇisuva pavanaṅgaḷa taraharisi taḍedaḍe-adu yōga! Yōga caturasadoḷagaṇa nilava kāṇabēku. Vajra nīlada hodikeyallirda bhuvanaṅgaḷa hoddi māṇikava nuṅgi uguḷadu-guhēśvarā.
Hindi Translation चौदह भवनों के भवन कीला खोकर वेग से बहते पवन को रोकना योग ! चौकाकार कमरे की स्थिति देखना । वज्र नील आवरण के भुवनों को शुद्ध करके माणिक निगल‌कर न थूकना गुहेश्वरा । Translated by: Eswara Sharma M and Govindarao B N
Tamil Translation பதினான்கு புலன்களுள்ள நிலையத்தின் கீலைக்களைந்து விரைந்து செல்லும் வாயுவை நிறுத்துவது யோகம், சதுர அறையினுள்ளே நிலைத்துள்ள இலிங்கத்தைக் காண்பாய், அடர்ந்த அஞ்ஞானம் சூழ்ந்த உலகங்களைத் தூய்மைசெய்து மாணிக்கத்தையுணர்ந்து நிலைகொள்வாய், குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಉಗುಳದಿರು = ಬಿಡದಿರು, ಸ್ಥಿರಗೊಳಿಸಿಕೊಳ್ಳು; ಉರವಣಿಸು = ರಭಸದಿಂದ ಸಂಚರಿಸು; ಕಳೆ = ತೆಗೆದುಹಾಕು; ಕೀಲು = ಅಗಳಿ, ಬಾಗಿಲು; ಚತುರಸ = ಚೌಕಾದ ಕೋಣೆ, ಅಂತರಂಗ; ತರಹರಿಸು = ನಿಲ್ಲಿಸು; ನಿಲುವು = ಜ್ಯೋತಿರ್ಮಯ ಲಿಂಗ, ಅಂತರಾತ್ಮ; ನುಂಗು = ಅವಧರಿಸು; ಪವನಂಗಳು = ವಾಯುಗಳು, ರೇಚಕ-ಪೂರಕ ಗತಿಯಿಂದ ಚರಿಸುವ ಪ್ರಾಣವಾಯು; ಭವನ = ಮಂದಿರ, ದೇಹ; ಭುವನ ಹದಿನಾಲ್ಕು = ಹದಿನಾಲ್ಕು ಭುವನಗಳು; ಪಂಚಕರ್ಮೇಂದ್ರಿಯ, ಪಂಚಜ್ಞಾನೇಂದ್ರಿಯ ಹಾಗೂ ಚತುಃಕರಣಗಳು; ಭುವನಂಗಳು = ಮನ, ಬುದ್ದಿ, ಚಿತ್ತು, ಅಹಂಕಾರಗಳು; ಮಾಣಿಕ = ಆತ್ಮಲಿಂಗ; ವಜ್ರನೀಲ = ಗಾಢವಾದ ಅಜ್ಞಾನ; ಹೊದಿಕೆ = ಆವರಣ; ಹೊದೆ = ಶಿವಭಾವದಿಂದ ಹೊದಿಸು, ಶುದ್ದಗೊಳಿಸು; Written by: Sri Siddeswara Swamiji, Vijayapura