Index   ವಚನ - 117    Search  
 
ಭಂಜಿಸಿಹೆನೆಂದೆಂಬೆ ಹಲಬರು ಭಂಜನೆಗೆ ಸಿಲುಕುವವು ಪ್ರಾಣಿಗಳಲ್ಲದೆ ಲಿಂಗವು ಭಂಜನೆಗೆ ಸಿಲುಕುವನೆ? ತಾತ್ಪರ್ಯಕ್ಕಲ್ಲದೆ. ಆ ಲಿಂಗದೆಂಜಲ ತಿಂದು ವೈಶಿಕವ ಮಾಡಿದಡೆ ಅದು ನಂಜಾಗಿ ಕಾಡುವದು ಕಾಣಾ! ರಾಮಾನಾಥ.