Index   ವಚನ - 1    Search  
 
ಅಂಗವುಂಟಾದಲ್ಲಿ ಲಿಂಗವನರಿಯಬೇಕು. ಲಿಂಗವುಂಟಾದಲ್ಲಿ ಚೇತನ ಭೂತಹಿತವನರಿಯಬೇಕು. ಆ ಅರಿವು ನೆಲೆಗೊಂಡಲ್ಲಿ ಒಳಗು ಹೊರಗು ವಿಚಾರಿಸಲಿಲ್ಲ. ಮಹಾರ್ಣವ ಬಲುಜಲವನಿಂಬಿಟ್ಟುಕೊಂಡಂತೆ. ಶರಣಸತಿಯಲ್ಲಿ ಲಿಂಗಕುಲದಲ್ಲಿ ಜಂಗಮಪದದಲ್ಲಿ ಗುರುಸ್ಥಲದಲ್ಲಿ ಕಂಗಳ ಮುಂದೆ ಮಹೇಂದ್ರಜಾಲ ನಿಂದಂತೆ, ನಿಂದ ನಿಲವೆ ಸದ್ಭಕ್ತನಿರವು; ಕಾಲಾಂತಕ ಭೀಮೇಶ್ವರಲಿಂಗದ ನಿಜವಾಸದ ಬೆಳಗು.