ಅಪ್ಪುವಿನಿಂದ ಸಕಲಮಯವೆಲ್ಲವು ಕಲ್ಪಿಸಿ,
ಅಪ್ಪುವಿನಿಂದ ಮಲ ನಿರ್ಮಲವೆಂಬುದಾಯಿತ್ತು.
ವಸ್ತುವಿನಿಂದ ರೂಪು ನಿರೂಪೆಂಬುದಾಯಿತ್ತು.
ಜಲದಿಂದಾದ ಪಂಕವ ಜಲ ತೊಳೆದು ನಿರ್ಮಲವಾದಂತೆ,
ನಿರೂಪು ಸ್ವರೂಪನಾಗಿ ಸ್ವರೂಪು ನಿರೂಪನಾಗಿ
ಉಭಯವು ನೀನಾಗಿ,
ನಾ ಕಂಡು ನುಡಿವುದಕ್ಕೆ ಎನಗೊಂದೆಡೆಯಿಲ್ಲ,
ಕಾಲಾಂತಕ ಭೀಮೇಶ್ವರಲಿಂಗವು ನೀನೆಯಾಗಿ.
Art
Manuscript
Music
Courtesy:
Transliteration
Appuvininda sakalamayavellavu kalpisi,
appuvininda mala nirmalavembudāyittu.
Vastuvininda rūpu nirūpembudāyittu.
Jaladindāda paṅkava jala toḷedu nirmalavādante,
nirūpu svarūpanāgi svarūpu nirūpanāgi
ubhayavu nīnāgi,
nā kaṇḍu nuḍivudakke enagondeḍeyilla,
kālāntaka bhīmēśvaraliṅgavu nīneyāgi.