Index   ವಚನ - 16    Search  
 
ಇಕ್ಷುದಂಡದ ಸಂಪರ್ಕದಲ್ಲಿ ದುತ್ತೂರ ಪಾಮರ ತರು ಬೆಳೆಯಲಿಕ್ಕೆ ಆ ಇಕ್ಷುದಂಡದ ಸಾರವ ಸಾಗಿಸಬಲ್ಲುದೆ? ಮದೋನ್ಮತ್ತನಲ್ಲಿ ಶ್ರುತಿ ಸ್ಮೃತಿ ತತ್ವ ಸರ್ವಸಾರಯುಕ್ತಿಯ ಲೇಖವಿದ್ಧಡೇನು? ಕ್ರೀ ಶುದ್ಧತೆಯಿಲ್ಲದವನ ವಾಚಾಯುಕ್ತಿ ಮೃತ್ತಿಕೆಯ ತೆಪ್ಪವ ಮಚ್ಚಿ ಕೆಟ್ಟವನಿರವಾಯಿತ್ತು. ಕಾಲಾಂತಕ ಭೀಮೇಶ್ವರಲಿಂಗವನರಿಯದವನ ಯುಕ್ತಿ.