Index   ವಚನ - 28    Search  
 
ಕಾಲ ಮೇಲೆ ಬಂದ ಮಾರಿ ಕಾಡುತ್ತಿದೆ ಜಗವೆಲ್ಲವ. ಕಾಲವೆಂಬ ಕಾಯವನರಿದು, ಮನವೆಂಬ ಮಾರಿಯ ಭವಗೆಡಿಸಿ ನಾ ತಂದೆ ಜ್ಞಾನಶಕ್ತಿಯ. ಆ ಶಕ್ತಿಯ ಧರ್ಮದಲ್ಲಿ ಮುಕ್ತಿಯ ಗಳಿಸಬಲ್ಲಡೆ ಕಾಲಾಂತಕ ಭೀಮೇಶ್ವರಲಿಂಗವು ಅವರವರಂಗಕ್ಕೆ ಹಿಂಗದಿಪ್ಪನು.