•  
  •  
  •  
  •  
Index   ವಚನ - 597    Search  
 
ಅದ್ವೈತನ ಕರಸ್ಥಲದೊಳಗೆ, ಅನಂತನೆಂಬ ಗಿಳಿ ಮೂರ್ತಗೊಂಡು, ಅತೀತ ಅನಾಗತ ವರ್ತಮಾನವೆಂಬ ಕೊರೆಕೂಳನುಂಡು, ಓದಿತ್ತು ಅಗಣಿತ ಪುರಾಣ, ಅನಾಮಯ ಶಾಸ್ತ್ರವನು, ಅನುಪಮ ವೇದವೆಂದು. ನಿಃಸ್ಥಲವ ಸ್ಥಲವಿಡಲು, ನಿರ್ಮಳಾತ್ಮಂಗೆ ಇಹವಿಲ್ಲ ಪರವಿಲ್ಲ! ಆದಿ ಮಧ್ಯಾಂತ ನಿರಾಳ ಗುಹೇಶ್ವರನ ಅನುಭವಿಗೆ ಸರ್ವಾಂಗ ಲಿಂಗವು!
Transliteration Advaitana karasthaladoḷage, anantanemba giḷi mūrtagoṇḍu, atīta anāgata vartamānavemba korekūḷanuṇḍu, ōdittu agaṇita purāṇa, anāmaya śāstravanu, anupama vēdavendu. Niḥsthalava sthalaviḍalu, nirmaḷātmaṅge ihavilla paravilla! Ādi madhyānta nirāḷa guhēśvarana anubhavige sarvāṅga liṅgavu!
Hindi Translation अद्वैत के करस्थल में अनंत जैसे शुक रूप बनकर, अतीत,अनागत वर्तमान अल्प आहार खाकर। पढ़ा था अगणित पुराण,अनामय शास्त्र। अनुपम वेद कहकर ! निःस्थल स्थल रहा। निर्मलात्मा को इह नहीं,पर नहीं, आदिमध्यांत निराला गुहेश्वर को अनुभवि को सर्वांग लिंग। Translated by: Eswara Sharma M and Govindarao B N
Tamil Translation அத்துவைத கரத்தலத்தில் அழிவற்ற கிளி நிலைத்து கடந்த, வருங்கால, நிகழ்காலமெனும் உணவை உண்டு, எண்ணற்ற புராணத்தை, இயலுலக சாத்திரத்தை, ஈடிணையற்ற வேதமென்று ஓதியது! பரசிவனை இதயத்தில் நிலைக்கச் செய்த தூயசரணனுக்கு இகமில்லை, பரமில்லை முதல் இடை கடையற்ற தூயோன் குஹேசுவரனே உணர்ந்தோனுக்கு உடலே இலிங்கமயமாம். Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಗಣಿತ = ಅನೇಕ; ಅತೀತ = ಆಗಿಹೋದ; ಅದ್ವೈತ = ದ್ವೈತವಿಲ್ಲದ, ಅಖಂಡನಾದ ಪರಶಿವ; ಅನಂತ = ಅಂತವಿಲ್ಲದ; ಅನಾಗತ = ಆಗಲಿರುವ; ಅನಾಮಯ = ಶುದ್ದಬೌದ್ದಿಕ; ಆದಿ ಮಧ್ಯಾಂತ ನಿರಾಳ = ಆದಿ ಮಧ್ಯ ಮತ್ತು ಅಂತ-ಈ ಕಾಲಿಕ ಭೇಧವಿಲ್ಲದ; ಕರಸ್ಥಲ = ಪರಶಿವನ ಅಂಕಿತಕ್ಕೆ ಒಳಪಟ್ಟ ಪ್ರಕೃತಿ, ದೇಹ; ಕೊರೆಕೂಳು = ಚಾರುಪಾರು ಆಹಾರ, ಅಲ್ಪಸುಖ; ಗಿಳಿ = ಜೀವಪಕ್ಷಿ, ಜೀವಾತ್ಮ; ನಿಃಸ್ಥಲ = ಪರಶಿವ; ನಿರ್ಮಳಾತ್ಮ = ಶರಣ; ಮೂರ್ತಿಗೊಳ್ಳು = ನೆಲೆಸು, ಆ ದೇಹವೇ ತಾನು ಎಂದು ಭಾವಿಸಿ ಅಭಿಮಾನಿಸು; ವರ್ತಮಾನ = ಆಗುತ್ತಲಿರುವ; ವೇದ = ಜ್ಞಾನ, ಅನುಭಾವಿಗಳ ನುಡಿ; ಸ್ಥಲವಿಡು = ಹೃದಯದಲ್ಲಿ ನೆಲೆಗೊಳಿಸು, ಅದ್ವಯಭಾವದಿಂದ ಅನುಸಂಧಾನಿಸು; Written by: Sri Siddeswara Swamiji, Vijayapura