Index   ವಚನ - 38    Search  
 
ತನುವೆಂಬ ಮೊರದಲ್ಲಿ ಮಾಯಾಗುಣವೆಂಬ ಮಾರಿಯ ಹಿಡಿದು ರಾಜಸ ತಾಮಸವೆಂಬ ಬಾಳು ಬಟ್ಟಲು ಕೈಯಲ್ಲಿ. ಪ್ರಳಯ ಸಂಹಾರವೆಂಬ ಬಳೆಯ ಕೈಯಲಿಕ್ಕಿ, ಅಂಗದ ಮನೆಯ ಬಾಗಿಲಲ್ಲಿ ಕೊಂಡು ಬಂದಿದೇನೆ. ಬಲ್ಲವರಿಕ್ಕಿ, ಅರಿಯದವರೆಲ್ಲರೂ ಸುಮ್ಮನಿರಿ. ಢಕ್ಕೆಯ ಉಲುಹಡಗುವುದಕ್ಕೆ ಮುನ್ನವೆ ನಿಶ್ಚಯಿಸಿ, ನಿಜತತ್ವವನರಿ, ಕಾಲಾಂತಕ ಭೀಮೇಶ್ವರ ಲಿಂಗವನರಿಯಬಲ್ಲಡೆ.