•  
  •  
  •  
  •  
Index   ವಚನ - 60    Search  
 
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ, ಎನಗಿದು ಸೋಜಿಗ, ಎನಗಿದು ಸೋಜಿಗ! ಅಹುದೆನಲಮ್ಮೆನು, ಅಲ್ಲೆನಲಮ್ಮೆನು, ಗುಹೇಶ್ವರಲಿಂಗವು ನಿರಾಳ ನಿರಾಕಾರ ಬಯಲು ಆಕಾರವಾದಡೆ!
Transliteration Kāṇabārada liṅgavu karasthalakke bandaḍe, enagidu sōjiga, enagidu sōjiga! Ahudenalam'menu, allenalam'menu, guhēśvaraliṅgavu nirāḷa nirākāra bayalu ākāravādaḍe!
English Translation 2 When the invisible Linga has come to my palm, How can I speak? Oh, wonder of wonders! The Guheśvaralinga, without form, without bound, Has taken a form and has come to my palm: How can I speak? Translated by: L M A Menezes, S M Angadi
Hindi Translation न दीखनेवाला लिंग, करस्थल आये तो, मुझे आश्चर्य, मुझे आश्चर्य । जी हाँ नहीं कह सकता, नहीं जी नहीं कह सकता, गुहेश्वर लिंग निराला, निराकार, शून्य रूप धारण करें तो । Translated by: Banakara K Gowdappa Translated by: Eswara Sharma M and Govindarao B N
Tamil Translation காணவியலாலிங்கம் கரத்தலத்திற்கு வந்துழி எனக்கிது வியப்பாம். எனக்கிது வியப்பாம்! ஆமாம் என கூறவியலாது, இல்லை எனக்கூற வியலாது குஹேசுவரலிங்கம் தூயது, வடிவற்றது வயல் வடிவினது. Translated by: Smt. Kalyani Venkataraman, Chennai
ಶಬ್ದಾರ್ಥಗಳು ಕರಸ್ಥಲಕ್ಕೆ ಬಂದಡೆ = ಕುರುಹುಗೊಂಡು ಹಸ್ತದಲ್ಲಿ ಕಾಣಬಂದರೆ; ಕಾಣಬಾರದ = ಇಂದ್ರಿಯಂಗಳಿಗೆ ಅಗೋಚರವಾದ; ಗುಹೇಶ್ವರಲಿಂಗವು = ಮಹಾಲಿಂಗವು; ಲಿಂಗವು = ಮಹಾಲಿಂಗವು; ದೃಶ್ಯವಿಶ್ವದ ಪರಮಾಧಾರವಾದ ಬ್ರಹ್ಮವು; Written by: Sri Siddeswara Swamiji, Vijayapura