Index   ವಚನ - 2    Search  
 
ಎನ್ನ ಘ್ರಾಣದಲ್ಲಿ ಆಚಾರಲಿಂಗವಾಗಿ ಬಂದು ಗಂಧಪದಾರ್ಥವ ಕೈಕೊಂಡನಯ್ಯಾ ಬಸವಣ್ಣ. ಎನ್ನ ಜಿಹ್ವೆಯಲ್ಲಿ ಗುರುಲಿಂಗವಾಗಿ ಬಂದು ರುಚಿಪದಾರ್ಥವ ಕೈಕೊಂಡನಯ್ಯಾ ಚನ್ನಬಸವಣ್ಣ. ಎನ್ನ ನೇತ್ರದಲ್ಲಿ ಶಿವಲಿಂಗವಾಗಿ ಬಂದು ರೂಪಪದಾರ್ಥವ ಕೈಕೊಂಡನಯ್ಯಾ ಘಟ್ಟಿವಾಳ ಮುದ್ದಯ್ಯ. ಎನ್ನ ತ್ವಕ್ಕಿನಲ್ಲಿ ಜಂಗಮಲಿಂಗವಾಗಿ ಬಂದು ಸ್ಪರುಶನಪದಾರ್ಥ ಕೈಕೊಂಡನಯ್ಯಾ ಸಿದ್ಧರಾಮಯ್ಯ. ಎನ್ನ ಶ್ರೋತ್ರದಲ್ಲಿ ಪ್ರಸಾದಲಿಂಗವಾಗಿ ಬಂದು ಶಬ್ದಪದಾರ್ಥವ ಕೈಕೊಂಡನಯ್ಯಾ ಮರುಳಶಂಕರದೇವ. ಎನ್ನ ಹೃದಯದಲ್ಲಿ ಮಹಾಲಿಂಗವಾಗಿ ಬಂದು ಸಕಲಪದಾರ್ಥವ ಕೈಕೊಂಡನಯ್ಯಾ ಪ್ರಭುದೇವ. ನೋಟದಲ್ಲಿ ಅನುಮಿಷ, ಕೂಟದಲ್ಲಿ ಅಜಗಣ್ಣ ಭಾವದಲ್ಲಿ ಬಾಚಿರಾಜಯ್ಯ, ಮನ ದೃಢವೆ ಮೋಳಿಗೆ ಮಾರಯ್ಯ. ಡೋಹರ ಕಕ್ಕಯ್ಯ ಕಿನ್ನರಿ ಬ್ರಹ್ಮಯ್ಯ ಸೊಡ್ಡಳ ಬಾಚರಸ ಹಡಪದಪ್ಪಣ್ಣಮಡಿವಾಳ ಮಾಚಯ್ಯ ಮುಖ್ಯವಾದ ಅಸಂಖ್ಯಾತ ಮಹಾಪ್ರಮಥಗಣಂಗಳ ಶ್ರೀಪಾದವನರ್ಚಿಸಿ ಪೂಜಿಸಿ ಸುಖಿಯಾದೆನಯ್ಯಾ ಅಮರಗುಂಡದ ಮಲ್ಲಿಕಾರ್ಜುನ.