ಗುರುಪಾದೋದಕ ಪರಮಪಾವನವೆಂದರಿದು
ಗುರುಪಾದೋದಕವನೆ ಧರಿಸುವುದು.
ಧರಿಸಿದಾತಂಗೆ ಅಷ್ಟಾಷಷ್ಟಿತೀರ್ಥಂಗಳು ತನ್ನೊಳಡಗಿಹವಯ್ಯಾ.
ಅದೆಂತೆಂದಡೆ:
'ಅಂಗುಷ್ಠಾಗ್ರೇ ಅಷ್ಟಾಷಷ್ಟಿತೀರ್ಥಂ ನಿತ್ಯಂ ವಸಂತಿ ವೈ'
ಎಂದುದಾಗಿ, ಶ್ರೀಗುರುವಿನ ಅಂಗುಷ್ಠಾಗ್ರದಲ್ಲಿ
ಸಕಲತೀರ್ಥಂಗಳಿರ್ಪವು.
ಶ್ರೀಗುರುವಿನ ಪಾದೋದಕ ಪರಮಪಾವನವೆಂದರಿದು
ಗುರುಪಾದೋದಕವನೆ ಧರಿಸುವುದು.
ಇದು ಕಾರಣ ಗುರುಪಾದೋದಕದಿಂದವೆ
ಪರಮಪದವಪ್ಪುದು, ಅಮರಗುಂಡದ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Gurupādōdaka paramapāvanavendaridu
gurupādōdakavane dharisuvudu.
Dharisidātaṅge aṣṭāṣaṣṭitīrthaṅgaḷu tannoḷaḍagihavayyā.
Adentendaḍe:
'Aṅguṣṭhāgrē aṣṭāṣaṣṭitīrthaṁ nityaṁ vasanti vai'
endudāgi, śrīguruvina aṅguṣṭhāgradalli
sakalatīrthaṅgaḷirpavu.
Śrīguruvina pādōdaka paramapāvanavendaridu
gurupādōdakavane dharisuvudu.
Idu kāraṇa gurupādōdakadindave
paramapadavappudu, amaraguṇḍada mallikārjunā.