Index   ವಚನ - 5    Search  
 
ಅರ್ತಿಗೆ ತಿರಿಗಿ ಮೊತ್ತದ ಮಾತನಾಡಿ ಕತ್ತೆ ಹೊರೆಯ ಹೊತ್ತು ಹೆಂಗತ್ತೆಯ ಕಂಡು ಬಾಯಬಿಟ್ಟು ಒರಲುವಂತೆ ಒರಲುತ್ತಿರ್ಪವರ ಕಂಡು ತ್ರಿವಿಧದ ಗೊತ್ತಿನ ಮಾರಿಯ ತುತ್ತೆಂದೆ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.