Index   ವಚನ - 7    Search  
 
ಅಷ್ಟವಿಧಾರ್ಚನೆ ಷೋಡಶ ಉಪಚರಿಯ ಷಟ್ಕರ್ಮ ತ್ರಿವಿಧವರ್ಮ ಚತುರ್ವಿಧಫಲಭೋಗ ಭೋಜ್ಯ ಪೂಜಾ ವ್ಯವಧಾನ ಕರ್ಮಂಗಳಲ್ಲಿ ಶೋಧಿಸಿ ವರ್ಮವನರಿಯಬೇಕು. ವರ್ಮವನರಿತಲ್ಲಿ ಸರ್ವಜೀವಕ್ಕೆ ಶಾಂತಿ, ಆಚಾರ್ಯನಂಗಕ್ಕೆ ನಿಹಿತ. ಸರ್ವಚೇತನಾದಿಗಳಲ್ಲಿ ಘಾತಕತನವಿಲ್ಲದೆ ಮನ ವಚನ ಕಾಯ ತ್ರಿಕರಣಶುದ್ಧವಾಗಿ ಈಶ್ವರಪೂಜೆಯ ಮಾಡುವಾತನ ಆಶ್ರಯದ ಶೇಷಪ್ರಸಾದವ ಕೊಂಬ ವೃಶ್ಚಿಕ ಮೂಷಕ ವಿಹಂಗ ಮಾರ್ಜಾಲ ಇಂತಿವರಂತೆ ಸದ್ಭಕ್ತನ ಬಾಗಿಲಲ್ಲಿ ಸಂತತ ಕಾಯುವಂತೆ ಮಾಡು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾ.