Index   ವಚನ - 9    Search  
 
ಆಚಾರ ಸದಾಚಾರ ವಿಚಾರ ಅವಿಚಾರ ಚತುವಿರ್ಧಕ್ಕೆ ಕರ್ತೃವಹಲ್ಲಿ ಭೇದಮಾರ್ಗಂಗಳ ತಿಳಿದು ಪಂಚಸೂತ್ರ ಲಕ್ಷಣಂಗಳನರಿತು ರವಿಶಶಿ ಉಭಯ ಸಮಾನಂಗಳ ಕಂಡು ವರ್ತುಳಯೋನಿಪೀಠದಲ್ಲಿ ಗೋಳಕಾಕಾರವ ಸಂಬಂಧಿಸುವಲ್ಲಿ ಅಷ್ಟಗಣ ನೇಮಂಗಳ ದೃಷ್ಟವ ಕಂಡು ರವಿ ಶಶಿ ಪವನ ಪಾವಕ ಆತ್ಮ ಮುಂತಾದ ಪವಿತ್ರಂಗಳಲ್ಲಿ ಮಾಂಸಪಿಂಡತ್ರಯವ ಕಳೆದು ಮಂತ್ರಜ್ಞಾನದಲ್ಲಿ ಸರ್ವೇಂದ್ರಿಯವ ಕಳೆದು ವೇದನೆ ವೇಧಿಸಿ ಸರ್ವಾಂಗವ ಭೇದಿಸಿ, ಸ್ವಸ್ಥಾನದಲ್ಲಿ ಘಟಕ್ಕೆ ಪ್ರತಿಷ್ಠೆ ಆತ್ಮಂಗೆ ಸ್ವಯಂಭುವೆಂಬುದು ಶ್ರುತದಲ್ಲಿ ಹೇಳಿ, ದೃಷ್ಟದಲ್ಲಿ ತೋರಿ ಅನುಮಾನದಲ್ಲಿ ಅರುಪಿ ಸುಖಸುಮ್ಮಾನಿಯಾಗಿ ಕ್ರೀಯಲ್ಲಿ ಆಚರಣೆ, ಜ್ಞಾನದಲ್ಲಿ ಪರಿಪೂರ್ಣತ್ವ. ಇಂತೀ ಗುಣಂಗಳ ತಿಳಿವುದು ಆಚಾರ್ಯನ ಅಂಗಸ್ಥಲ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಆಚಾರ್ಯನಾದ ಲೀಲಾಭಾವ.