Index   ವಚನ - 12    Search  
 
ಇಂತೀ ಸ್ಥಲ ಕುಳಂಗಳಲ್ಲಿ ವೇಧಿಸಿ ಭೇದಿಸಿಹೆನೆಂದಡೆ ನಾಲ್ಕು ವೇದ ಹದಿನಾರು ಶಾಸ್ತ್ರ ಇಪ್ಪತ್ತೆಂಟು ದಿವ್ಯಪುರಾಣಂಗಳೊಳಗಾದ ಶಬ್ದಶಾಸ್ತ್ರ, ಸಂಸ್ಕೃತ, ಅಕ್ಷರಜ್ಞತ್ವ, ಭರತ ಶಿಲ್ಪ ಮುಂತಾದ ಕ್ರಿಯಾಕಾರಕಂಗಳ ತಿಳಿದು ನೋಡಿದರೂ ಪಂಚಾಕ್ಷರದ ಮೂಲ ಪಂಚಾಕ್ಷರಿಯ ಪ್ರಣಮವನರಿಯಬೇಕು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದಕ್ಕೆ.