Index   ವಚನ - 14    Search  
 
ಇಷ್ಟಲಿಂಗವೆಂಬುದ ಕೊಟ್ಟು ತಾ ಸಂಸಾರದ ಬುಟ್ಟಿಯೊಳಗನ್ನಕ್ಕ ಕರ್ಮಕಾಂಡ. ಆತ್ಮಬೋಧೆಯ ವೇಧಿಸಬೇಕೆಂದು ವಾದಿಸಿ ಸರ್ವಚೇತನದಲ್ಲಿ ಭ್ರಾಂತನಾಗಿ ತಿರುಗುತ್ತ ಇಪ್ಪವನ ನಿಹಿತದ ಮಾತು ಭವಪಾಶದ ಗ್ರಾಸ. ಇಂತೀ ನಿಹಿತವನರಿತು ಅಷ್ಟವಿಧಾರ್ಚನೆಗೆ, ಮುಕ್ತಿ ನಿಜತತ್ವಕ್ಕೆ ನಿರವಯ ದೃಷ್ಟಕ್ಕೆ ದೃಷ್ಟವಸ್ತುವನಿತ್ತು ತಾ ನಿಶ್ಚಯದಲ್ಲಿ ನಿಜವಾಸಿಯಾಗಬಲ್ಲಡೆ ಕರ್ತೃಭೃತ್ಯತ್ವವೆಂಬುದು ನಿಶ್ಚಯ ನೋಡಾ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದು.