ಏಕವಸ್ತು ಉಭಯಭೇದವಾಗಿ
ತ್ರಿವಿಧಮಾರ್ಗವನಾಚರಿಸಿ
ಚತುರ್ಭಾಗವಾಗಿ ಪಂಚವಕ್ತ್ರವ ಅವಧರಿಸಿದಲ್ಲಿ
ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ ಸ್ವರೂಪವ ತಾಳಿದಲ್ಲಿ
ಚರ್ಚೆಗೆ ಬಂದ ಎಕ್ಕ ಸೋಲವ ಬಿಟ್ಟು
ಮಿಕ್ಕಾದ ಷಡ್ದರ್ಶನವುಂಟೆಂದು ಹೆಕ್ಕಳ ಗೆಲೆಯದೆ
ಶಕ್ತಿಯ ಧರಿಸಿದ ಉಭಯರೂಪು,
ಶಕ್ತಿನಿಶ್ಚಯವಾದಲ್ಲಿ ನಿಜಸ್ವರೂಪು.
ಅದು ಬಚ್ಚಬಯಲು.
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು
ಸ್ವಯಂಭುವಾದ ತೆರ.
Art
Manuscript
Music
Courtesy:
Transliteration
Ēkavastu ubhayabhēdavāgi
trividhamārgavanācarisi
caturbhāgavāgi pan̄cavaktrava avadharisidalli
brahma, viṣṇu, rudra, īśvara, sadāśiva svarūpava tāḷidalli
carcege banda ekka sōlava biṭṭu
mikkāda ṣaḍdarśanavuṇṭendu hekkaḷa geleyade
śaktiya dharisida ubhayarūpu,
śaktiniścayavādalli nijasvarūpu.
Adu baccabayalu.
Cannabasavaṇṇapriya bhōgamallikārjunaliṅgavu
svayambhuvāda tera.