Index   ವಚನ - 23    Search  
 
ಒಂದೊಂದವರೆಯಿಲ್ಲದ ಯುಗ ಚಂದ್ರಾದಿಗಳು ಜನಿಸದಲ್ಲಿ ಬಿಂದು, ಲಘು, ಗುರು, ಉಭಯಂಗಳಿಲ್ಲದ ಮತ್ತೆ ಜಗವ ಸಂಧಿಸಿ ಶರಣೆನಿಸಿಕೊಂಬ ದೇವರಾರಯ್ಯ? ಪ್ರಥಮದಲ್ಲಿ ಘನಕಲ್ಪಾಂತರಕ್ಕೆ ಎಯ್ದಿದ ದ್ವಿತೀಯದಲ್ಲಿ ಶಂಭು ಕೂಡಿದ ತೃತೀಯದಲ್ಲಿ ಪ್ರಮಾಣು ಅವಧಿಗೊಳಗಾದ ಪಂಚವಿಂಶತಿತತ್ವದಿಂದತ್ತ ಅಭೇದ್ಯವಸ್ತು ವೈದಿಕ ಮಾಯಾಭೇದವೆಂಬ ಸ್ವರೂಪವ ಕಂಡು ಪೂರ್ವಭಾಗದಲ್ಲಿ ಶಕ್ತಿಯ ಧರಿಸಿ, ಉತ್ತರಭಾಗದಲ್ಲಿ ವಸ್ತು ತಾನಾಗಿ ವಾಮಾಂಗನಾದ ವಿಷ್ಣುವಿಗೆ ಓಲೆಯನಿಟ್ಟು, ಬ್ರಹ್ಮಂಗೆ ನಾಲಗೆಯ ಕೊಟ್ಟು.ಏಕಾದಶರುದ್ರರಿಗೆ ಮುಖ್ಯನಾದ ಪರಮೇಶ್ವರಂಗೆ ಪರಮಪದವ ಕೊಟ್ಟು ನೀ ಭಕ್ತರ ಹೃತ್ಕಮಲಮಧ್ಯದಲ್ಲಿ ನಿಜವಾಸಿಯಾದೆಯಲ್ಲಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ.