Index   ವಚನ - 32    Search  
 
ಗುರುವಿಂಗೆ ಗುರುವುಂಟು, ಉಭಯನಾಮವಾಗಿ. ಲಿಂಗಕ್ಕೆ ಲಿಂಗವುಂಟು, ಕುರುಹೆಂಬ ಭೇದವುಂಟಾಗಿ. ಆತ್ಮಂಗೆ ಅರಿವುಂಟು, ಮುಂದೆ ಒಂದು ಮರಣವುಂಟಾಗಿ. ಇಂತೀ ಭೇದಂಗಳು ಬೇಕಾದ ಉಮಾಪತಿಯಾದಲ್ಲಿ ಉಭಯವಾಯಿತ್ತು. ಶಕ್ತಿಸಮೇತವೆಂಬುದು ಕರ್ತೃಭೃತ್ಯ ಸಂಬಂಧ. ಇಂತೀ ಆಚಾರ್ಯನಂಗ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗ.