ತತ್ವಂಗಳಿಂದ ಗೊತ್ತ ನೋಡಿಹೆನೆಂದಡೆ
ಮರ್ಕಟ ದರ್ಪಣದಂತೆ, ತಾನಾಡಿದಂತಲ್ಲದೆ
ಬೇರೊಂದು ಗುಣವಿಲ್ಲ.
ಗಿರಿಯ ಗಹ್ವರದಲ್ಲಿ ಕರೆದಡೆ ಕರೆದಂತೆ
ವಿಶ್ವಾಸವೆಂತ ಅಂತೆ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗ ಹಾಂಗಿಪ್ಪನು.
Art
Manuscript
Music
Courtesy:
Transliteration
Tatvaṅgaḷinda gotta nōḍ'̔ihenendaḍe
markaṭa darpaṇadante, tānāḍidantallade
bērondu guṇavilla.
Giriya gahvaradalli karedaḍe karedante
viśvāsaventa ante
cannabasavaṇṇapriya bhōgamallikārjunaliṅga hāṅgippanu.