ಲಿಂಗವಂತಂಗೆ ಲಿಂಗದ ವಾರ್ತೆಯ ನುಡಿವುದೆ ಭಂಗ,
ಹಂಗು ನೋಡಾ ಹಂಗಿನ ಶಬ್ದ ನೋಡಾ!
ಕೊಡನ ತುಂಬಿದ ಹಾಲನೊಡೆಯ ಹಾಯಿಕಿ
ಇನ್ನು ಉಡಿಗಿಹೆನೆಂದಡೆ ಉಂಟೆ ಗುಹೇಶ್ವರಾ?
Transliteration Liṅgavantaṅge liṅgada vārteya nuḍivude bhaṅga,
haṅgu nōḍā haṅgina śabda nōḍā!
Koḍana tumbida hālanoḍeya hāyiki
innu uḍigihenendaḍe uṇṭe guhēśvarā?
Hindi Translation लिंगवंत को लिंगवार्ता सुनना भंग है।
कृतघ्नता देखो, कृतघ्न शब्द देखो।
दूध भरे घड़े को फोड़कर
फिर से बटोर भर सकते, गुहेश्वरा?
Translated by: Banakara K Gowdappa
Translated by: Eswara Sharma M and Govindarao B N
Tamil Translation இலிங்கத்துடனொருமித்தவன் இலிங்கத்தைக்
குறித்துப் பேசுவதே குற்றமாம்.
சார்புகாணாய், சார்பெனும் சொல்லைக்காணாய்,
பால் நிறைந்த குடம் உடைந்து சிதற,
அதனைத் திரட்டவியலுமோ குஹேசுவரனே?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಉಡುಗು = ಬಳಿದು ಸಂಗ್ರಹಿಸು; ಒಡೆಯ ಹಾಯ್ಕು = ಒಡೆದುಹಾಕು; ಭಂಗ = ದೋಷ, ಸತ್ಯಕ್ಕೆ ದೂರ; ಲಿಂಗದ ವಾರ್ತೆ = ಲಿಂಗ ವಿಷಯಕವಾದ ಮಾತು; ಲಿಂಗವಂತ = ಲಿಂಗದೊಡನೆ ಸಮರಸಗೊಂಡ ಐಕ್ಯಸ್ಥಲಿ; ಹಂಗು = ಅವಲಂಬನೆ, ಅವಲಂಬಿತವಾದುದು. ಔಪಾಧಿಕವಾದುದು;
Written by: Sri Siddeswara Swamiji, Vijayapura