Index   ವಚನ - 66    Search  
 
ಭೇದ ಉತ್ತರಕಾವ್ಯ ಪೂರ್ವಾಂತರ ಜೈಮಿನಿ ಭುವನಕೋಶ ಕಾಲಚಕ್ರ ಭೂಚಕ್ರ ಷಡಾಧಾರ ಸನ್ಮತಚಕ್ರ ಆತ್ಮವಾಯು ಸಂಪರ್ಕ ಸಂಭವ ಚಕ್ರಂಗಳಲ್ಲಿ ಹೂಣೆಹೊಕ್ಕು ನೋಡಿದಡೂ ಕರ್ಮವಾರ ತಿಳಿದು ವರ್ಮ ಮೂರನರಿದು ಮಿಕ್ಕಾದ ದುಃಕರ್ಮದಲ್ಲಿ ಹೋಗದೆ ನಿಶ್ಚಿಂತನಾದ ನಿರತ ಸ್ವಯಾನುಭಾವಿಗೆ ಉಂಡಡೆ ಉಪವಾಸಿಯಾಗಿಪ್ಪ, ಬಳಸಿದಡೆ ಬ್ರಹ್ಮಚಾರಿಯಾಗಿಪ್ಪ. ಭಾಗೀರಥಿಯಂತೆ ಆವ ಜೀವದಿಂದ ನಿಂದಡೂ ಸಮಪ್ರಮಾಣ ಗರಳವ ಮೀರಿದಾಗ ವಾದಿಗೆ ವಾದವ ನುಡಿಯ, ಶಾಸ್ತ್ರದ ಸಂದಣಿಯ ಹೊಗ ಪುರಾಣದ ಪೂರ್ವವ ವಿಸ್ತರಿಸ. ವೇದವ ವಿಭೇದವೆಂದು, ಆಹ್ವಾನ ವಿಸರ್ಜನವಿಲ್ಲ. ಸರ್ವಗುಣದಲ್ಲಿ ಸಂಪೂರ್ಣನಾದ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನಾದ ಶರಣನು.