ರಿತು ರುತು ಪ್ರಾತಃಕಾಲ
ಅರ್ಘ್ಯಂಗಳ ನ್ಯಾಸ ಅಂಗುಲವಾಸ ಪಚ್ಫಳ ಮಡಿ ಕಟಿಸೂತ್ರ
ಗುಹ್ಯ ನಾಭಿ ಪಂಚಾಗ್ನಿ ಮಧ್ಯ ಬಾಹುಗಳ ಜಿಹ್ವೆ
ನಾಸಿಕ ನಯನ ಕರ್ಣ ಲಲಾಟ ಮಸ್ತಕ ಕರ ಸಂಜ್ಞೆಗಳಲ್ಲಿ
ನ್ಯಾಸಸೂತಕನಾಗಿ, ಜಪಗ್ರಹಿತನಾದಡೂ
ಶಿವಧ್ಯಾನಮೂರ್ತಿಯಿಂದ ಪರಿಹರಿಸಬೇಕು,
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದಕ್ಕೆ ಕರ್ಮಕ್ರೀ.
Art
Manuscript
Music
Courtesy:
Transliteration
Ritu rutu prātaḥkāla
arghyaṅgaḷa n'yāsa aṅgulavāsa pacphaḷa maḍi kaṭisūtra
guhya nābhi pan̄cāgni madhya bāhugaḷa jihve
nāsika nayana karṇa lalāṭa mastaka kara san̄jñegaḷalli
n'yāsasūtakanāgi, japagrahitanādaḍū
śivadhyānamūrtiyinda pariharisabēku,
cannabasavaṇṇapriya bhōgamallikārjunaliṅgavanarivudakke karmakrī.