Index   ವಚನ - 91    Search  
 
ಶಿವಾಧಿಕ್ಯಸಂಪನ್ನ ಶಿವಯೋಗಿಯಾದಲ್ಲಿ ಶಿವತತಿ ಶಿವಾಚಾರ ಶಿವಾಧಿಕ್ಯ ಪಂಚಮುದ್ರೆ ಪಂಚಾಚಾರ ಪ್ರಮಾಣು ಎಲ್ಲವು ಸರಿಯಲ್ಲದೆ ಬೇರೆ ಅಲ್ಲಿ ಅನ್ಯರು ಎಮ್ಮವರೆಂದುಂಟೆ ? ಅರಿವು ಕರಿಗೊಂಡವ ತನ್ನವ. ಆಚಾರಕ್ಕೆ ಅನುಸರಣೆಯಿಲ್ಲದವ ತನ್ನವ. ಈ ಉಭಯಕ್ಕೆ ಹೊರಗಾದವ ಅನ್ಯನೆಂದು ಕಾಬುದು ವಿಚಾರಮತ, ಆಚಾರ್ಯಸ್ಥಲ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.