Index   ವಚನ - 8    Search  
 
ಆದಿಶುದ್ಧ ಆಚಾರಲಿಂಗವೆನ್ನುತ್ತಿರ್ಪರೆಲ್ಲರು ಅನಾದಿಯ ಲಿಂಗದ ಭೇದವನರಿಯರಾಗಿ, ನಾಸಿಕಪುಟದ ಆಶ್ರಯದಲ್ಲಿ ಲಿಂಗವನರಿಯರಾಗಿ. ಕೆಲಬರಿಗೆ ಲಿಂಗವು ಹಲಬರಿಗೆ ದೂಷಣೆಯ ಮಾಡಿ ಹೋದ ಲಿಂಗವನರಿಯರಾಗಿ ದೂಷಣೆ ಪಥ್ಯವಾಗಿ, ಮನದಾಶ್ರಯಕ್ಕೆ ತಂದಾತ, ರೇಕಣ್ಣಪ್ರಿಯ ನಾಗಿನಾಥಾ. ಬಸವಣ್ಣನಿಂದ ಬದುಕಿದೆ.