Index   ವಚನ - 12    Search  
 
ಎಂಟು ತಟ್ಟೆಯ ನೆಟ್ಟು, ಒಂಬತ್ತು ನೇಣು ಕಟ್ಟಿ ಎಂಟ ಬಿಟ್ಟು ಒಂದೇ ನೇಣಿನಲ್ಲಿ ಹತ್ತಿ ಆಡುತ್ತಿರಲಾಗಿ ತಟ್ಟೆ ಮುರಿದು, ಮೆಟ್ಟಿನಿಂದ ದಾರ ಕಿತ್ತು, ನೋಡುವರ ದೃಷ್ಟಿ ಬಟ್ಟಬಯಲು ರೇಕಣ್ಣಪ್ರಿಯ ನಾಗಿನಾಥನಲ್ಲಿಆಟವನಾಡಿದ ಅರಿದಾಗಿ.