Index   ವಚನ - 18    Search  
 
ಒಂಬತ್ತುಇಟ್ಟಿಯ ನಡುವೆ ಒಂದು ಕತ್ತಿಯ ನಟ್ಟು ತುಟ್ಟ ತುದಿಯ ಮೆಟ್ಟಿ ಆಡಲಾಗಿ, ಆ ಕತ್ತಿ ಇಟ್ಟಿಯ ತಾಗಿ, ಆ ಇಟ್ಟಿ ನಿಷ್ಠೆವಂತರ ತಾಗಿ ಸತ್ತರೆಲ್ಲರು ಆಟಕ್ಕೆ ಮೊದಲೇ ರೇಕಣ್ಣಪ್ರಿಯ ನಾಗಿನಾಥನಲ್ಲಿ.