Index   ವಚನ - 25    Search  
 
ಗಾರುಡಿಗನ ವಿಷವಡರಬಲ್ಲುದೆ ? ಸೂರ್ಯನ ಮಂಜು ಮುಸುಕಬಲ್ಲುದೆ ? ಗಾಳಿಯ ಮೊಟ್ಟೆಯ ಕಟ್ಟಬಹುದೆ? ಅಗ್ನಿಯ ಕೈಯಿಂದ ಆಕಾಶ ಬೇಯಬಲ್ಲುದೆ ? ನಿಮ್ಮನರಿದ ನಿಜಯೋಗಿಗೆ ಕರ್ಮಪಾಶವೆಲ್ಲಿಯದೊ ರೇಕಣ್ಣಪ್ರಿಯ ನಾಗಿನಾಥಾ ?