Index   ವಚನ - 37    Search  
 
ಪದ್ಮಾಸನದಲ್ಲಿ ಕುಳ್ಳಿರ್ದು ಆಧಾರಮಂ ಬಲಿದು ವಾಯುವ ಊರ್ಧ್ವಕ್ಕೆ ತಿದ್ದಿ ಮನ ಪವನ ಬಿಂದುವ ತ[ರ]ಹರವಂ ಮಾಡಿ ಷಡಾಧಾರ ಕಮಲವನೂರ್ಧ್ವಮುಖವಂ ಮಾಡಿ ಮೇಲಣ ಸಹಸ್ರಕಮಲಮಧ್ಯದೊಳಿಪ್ಪ ಜ್ಯೋತಿರ್ಲಿಂಗದಲ್ಲಿ ಮನವ ನಿಲಿಸಿ, ನೆನೆನೆನೆದು ಕೀಟಭೃಂಗನ್ಯಾಯದಂತಪ್ಪುದೆ ಯೋಗ ರೇಕಣ್ಣಪ್ರಿಯ ನಾಗಿನಾಥಾ.