ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ
ಐವರು ಮಕ್ಕಳು ಜನಿಸಿದರೆಂತೆಂಬೆ:
ಒಬ್ಬ ಭಾವದ ರೂಪು, ಒಬ್ಬ ಪ್ರಾಣದ ರೂಪು.
ಒಬ್ಬ ಕಾಯದ ರೂಪು, ಒಬ್ಬನೈಮುಖನಾಗಿ
ವಿಷಯಕ್ಕೆ ಕಾಯರೂಪನಾದ.
ಒಬ್ಬನೆಲ್ಲರ ಕೂಡಿಕೊಂಡು ನಿರವಯವಾಗಿರ್ಪ.
ಇಂತಿವರ ಕೂಡಿಕೊಂಡು ಈ ಲೋಕಕ್ಕೆ ಬಂದೆನು.
ಆನು ಹೋಗೆನಯ್ಯಾ,
ಇನ್ನು ಹೋದೆನಾದಡೆ ಎನಗಿರ ಠಾವಿಲ್ಲ.
ಮುನ್ನ ಹೋದವರೆಲ್ಲಾ ತಗಹಿನಲ್ಲಿ ಕುಳ್ಳಿರ್ದರು.
ಆನು ಆ ತಗಹನರಿತೆನಾಗಿ ಬಲ್ಲಡೆ ಬಂದೆನಿಲ್ಲಿಗೆ.
ಇಲ್ಲೆನ್ನೊ ಮದ್ದಳಿಗ, ಒಲ್ಲೆನ್ನೊ ಕಹಳೆಕಾರ.
ಬಿಂದುವ ಹರಿದು ತಿಂದು ಹಾಕಿರೊ,
ತಂತಿಯ ಹರಿಯಿರೊ. ತಾಳ ವಿತಾಳವಾಯಿತ್ತಲ್ಲಾ ಕೇಳಿರೆ ಕೇಳಿರೆ.
ನಿಃಶೂನ್ಯವಾಯಿತ್ತಲ್ಲಾ ಕೇಳಯ್ಯ ಕೇಳಯ್ಯ.
ರೇಕಣ್ಣಪ್ರಿಯ ನಾಗಿನಾಥಾ, ಬಸವಣ್ಣನಿಂದ ಬದುಕಿತೀ ಲೋಕವೆಲ್ಲಾ.
Art
Manuscript
Music
Courtesy:
Transliteration
Bayalinda huṭṭida paravemba tāyige
aivaru makkaḷu janisidarentembe:
Obba bhāvada rūpu, obba prāṇada rūpu.
Obba kāyada rūpu, obbanaimukhanāgi
viṣayakke kāyarūpanāda.
Obbanellara kūḍikoṇḍu niravayavāgirpa.
Intivara kūḍikoṇḍu ī lōkakke bandenu.
Ānu hōgenayyā,
Innu hōdenādaḍe enagira ṭhāvilla.
Munna hōdavarellā tagahinalli kuḷḷirdaru.
Ānu ā tagahanaritenāgi ballaḍe bandenillige.
Illenno maddaḷiga, ollenno kahaḷekāra.
Binduva haridu tindu hākiro,
tantiya hariyiro. Tāḷa vitāḷavāyittallā kēḷire kēḷire.
Niḥśūn'yavāyittallā kēḷayya kēḷayya.
Rēkaṇṇapriya nāgināthā, basavaṇṇaninda badukitī lōkavellā.