Index   ವಚನ - 63    Search  
 
ಹಿರಿಯರೆಂತಿರ್ಪರಯ್ಯಾ? ಅಯ್ಯಾ, ದಿಟದ ರಾಸಿಗೆ ಅವರ ಘಟ ಲಕ್ಷಣ. ನಿಸ್ಸೀಮರೆಂತಿರ್ಪರಯ್ಯಾ? ಅಯ್ಯಾ, ಸೀಮೆಗೆಡೆಗುಡದ ಬಯಲನೊಳಕೊಂಡಿರ್ಪರು. ಭಾವರೆಂತಿರ್ಪರಯ್ಯಾ? ಅಯ್ಯಾ, ಕಣ್ಣಾಲಿ ದೃಷ್ಟಿಯ ನುಂಗಿದಂತೆ. ನೀರೆಂತು ನೆನೆವುದೆಂದು ಬೆಸಗೊಂಡಡೆ ಹೇಳುವ ಶಬ್ದದಂತಿಹುದದರ ನಿಲುವು. ಲಿಂಗ ಮಧ್ಯೇ ಜಗತ್ಸರ್ವಂ ಲಿಂಗದಂಗ ರೇಕಣ್ಣಪ್ರಿಯ ನಾಗಿನಾಥನಂತಿರ್ಪರು.