Index   ವಚನ - 6    Search  
 
ಮೇಘಮಂಡಲದರಸನು ಅನುರಸದರಸಿಯ ಮೈಯಲ್ಲಿ ತಾಗಿ ಒದಗಿದನುಮಿಷ ರತ್ನಪ್ರಭೆಯ ನೋಡುವಡೆ ಇಪ್ಪತ್ತೈದು ನೂರೆಂಟರ ಮಧ್ಯ [ತುಗಿ]ವ ಸಮಾಧಿ[ಕೆ] ತಾರಾಮತ್ಸ್ಯದ ಆನೆಯ ಕುಂಬಸ್ಥಳದ [ಜ]ವನಿಕೆಯ ಮೇಲೆ ಜಾಣ ನಿಟ್ಟಿಸಬಲ್ಲಡೆ ಹೇಳಾ. ಕನ್ನದುಳಿಯ ಕೆಂಪನು ತನ್ನ ಕೈಯಲ್ಲಿ ಕೊಟ್ಟಡೆ ಬಿನ್ನಣದ ಕಳವು ಹೇಳಾ. ತನ್ನ ಮನೆಯಲ್ಲಿ ಕರ್ಣಚಕ್ರಪತ್ರವನಿರಿಸಿದಡೆ ನಿನ್ನಳವೆ ? ಲೋಕದೊಳು ಬಲ್ಲ ಜಾಣರು. ಆ [ಹ]ಣ್ಣಿನೊಳಗಣ ಪದ್ಮದೆಸಳೆಸಳು ಕಮ್ಮೇರಿ ದೇವ ಬಳ್ಳೇಶ್ವರನ ಅನುಭಾವದ ಸರಿದೊಡಕು.