ಶುದ್ಧಸಾಳಾಂಗಗತಿ ಗಮಕವಡೆದ ರಾಗದಲ್ಲಿ
ಪರಿಠಾಯಕದಳ ಕಮ್ಮಟನು ಪೂಜಿತನು
ರಸವನಾಲಿಸುತ ಗಜಗಮನೆಯರು ಆಡಿ ಹಾಡಿ
ರುದ್ರವೀಣೆಯ ಬಾರಿಸುವಲ್ಲಿ
ಬಧಿರ ಮೂಕ ಅಂಧಕರ ಮುಂದೆ ನೃತ್ಯ ತೋರಬಹುದೆ ?
ಹಜ್ಜೆಯ ಹರಿಣ ಭುಜಂಗ ಜಂಬುಕ ಹುಲ್ಲೆಯ
ತೋಳ ಹುಲಿ ಕರಡಿ ಒಬ್ಬುಳಿಯಾಗಿ ನೆರೆದಡೆ
ದೇವಸಭೆಯಾಗಬಲ್ಲುದೆ ?
ಶುದ್ಧಧವಳಿತ ಭಾನುಕೋಟಿತೇಜಪ್ರಭೆಮಂಡಲವ
ರವಿ ಉದಯ ಒಬ್ಬನೆನಬಹುದೆ
ದೇವ ಬಳ್ಳೇಶ್ವರ ವೀರಭದ್ರಾವತಾರವಾ
Art
Manuscript
Music
Courtesy:
Transliteration
Śud'dhasāḷāṅgagati gamakavaḍeda rāgadalli
pariṭhāyakadaḷa kam'maṭanu pūjitanu
rasavanālisuta gajagamaneyaru āḍi hāḍi
rudravīṇeya bārisuvalli
badhira mūka andhakara munde nr̥tya tōrabahude?
Hajjeya hariṇa bhujaṅga jambuka hulleya
tōḷa huli karaḍi obbuḷiyāgi neredaḍe
dēvasabheyāgaballude?
Śud'dhadhavaḷita bhānukōṭitējaprabhemaṇḍalava
ravi udaya obbanenabahude
dēva baḷḷēśvara vīrabhadrāvatāravā