ಹಾವಿನ ಬಿಲದಲ್ಲಿ ಕೋಲನಿಕ್ಕಲಾಗಿ
ಕೋಲ ಬೆಂಬಳಿಯಲ್ಲಿ ಹಾಯ್ವ
ಹಾವಿನ ತೆರನಂತೆ ನಿಶ್ಚಯವಸ್ತು.
ಇದನರಿವುತ್ತವೆ ನಿಜವಸ್ತುವಿನ ಗುಣ
ಮೋಹದಲ್ಲಿ ಅಚ್ಚೊತ್ತಿದಂತೆ
ಎರಡಳಿಯಬೇಕು, ವೀರಶೂರ ರಾಮೇಶ್ವರನಲ್ಲಿ.
Art
Manuscript
Music
Courtesy:
Transliteration
Hāvina biladalli kōlanikkalāgi
kōla bembaḷiyalli hāyva
hāvina teranante niścayavastu.
Idanarivuttave nijavastuvina guṇa
mōhadalli accottidante
eraḍaḷiyabēku, vīraśūra rāmēśvaranalli.