ಕಕ್ಷೆಯಲ್ಲಿ ಲಿಂಗವ ಧರಿಸಿಕೊಂಡಾತನು ಬ್ರಹ್ಮನು.
ಕರಸ್ಥಲದಲ್ಲಿ ಲಿಂಗವ ಧರಿಸಿಕೊಂಡಾತನು ವಿಷ್ಣುವು.
ಉತ್ತಮಾಂಗದಲ್ಲಿ ಲಿಂಗವ ಧರಿಸಿಕೊಂಡಾತನು ರುದ್ರನು.
ಅಮಳೊಕ್ಯದಲ್ಲಿ ಲಿಂಗವ ಧರಿಸಿಕೊಂಡಾತನು ಈಶ್ವರನು.
ಮುಖಸೆಜ್ಜೆಯಲ್ಲಿ ಲಿಂಗವ ಧರಿಸಿಕೊಂಡಾತನು ಸದಾಶಿವನು.
ಅಂಗಸೆಜ್ಜೆಯಲ್ಲಿ ಲಿಂಗವ ಧರಿಸಿಕೊಂಡಾತನು ಉಪಮಾತೀತನು-
ಇವರೆಲ್ಲರೂ ಬಯಲಲ್ಲಿ ಹುಟ್ಟಿ ಬಯಲಲ್ಲಿ ಬೆಳೆದು,
ಬಯಲನೆ ಪೂಜಿಸಿ ಬಯಲಾಗಿ ಹೋದರು.
ನಾನು ನಿತ್ಯವ ಪೂಜಿಸಿ ಮಿಥ್ಯವಳಿದ ಇರವಿನಲ್ಲಿ
ಸುಖಿಯಾದೆನು ಗುಹೇಶ್ವರಾ.
Transliteration Kakṣeyalli liṅgava dharisikoṇḍātanu brahmanu.
Karasthaladalli liṅgava dharisikoṇḍātanu viṣṇuvu.
Uttamāṅgadalli liṅgava dharisikoṇḍātanu rudranu.
Amaḷokyadalli liṅgava dharisikoṇḍātanu īśvaranu.
Mukhasejjeyalli liṅgava dharisikoṇḍātanu sadāśivanu.
Aṅgasejjeyalli liṅgava dharisikoṇḍātanu upamātītanu-
ivarellarū bayalalli huṭṭi bayalalli beḷedu,
bayalane pūjisi bayalāgi hōdaru.
Nānu nityava pūjisi mithyavaḷida iravinalli
sukhiyādenu guhēśvarā.
Hindi Translation कक्षा में लिंग धारण किया हुआ ब्रह्म।
करस्थल में लिंग धारण किया हुआ विष्णु ।
उत्तमांग में लिंग धारण किया हुआ रुद्र ।
अमळोक्य में लिंगधारण किया हुआ ईश्वर।
मुख सज्जा में लिंग धारण किया हुआ सदाशिव।
अंगशैया में लिंग धारण किया हुआ उपमातीत।
ये सब शून्य की पूजाकर शून्य में लीन होगये।
मैं रोज पूजा करके मिथ्या दूरकर
सुखी हुआ गुहेश्वरा।
Translated by: Banakara K Gowdappa
Translated by: Eswara Sharma M and Govindarao B N
Tamil Translation கட்கத்தில் இலிங்கம் தரித்தவன் பிரம்மன்,
கரத்தலத்தில் இலிங்கம் தரித்தவன் விஷ்ணு,
தலையில் இலிங்கம் தரித்தவன் உருத்திரன்,
முகத்தில் இலிங்கம் தரித்தவன் ஈசுவரன்,
முகப்பேழையில் இலிங்கம் தரித்தவன் சதாசிவன்,
உடல் பேழையில் லிங்கம் தரித்தவன் உவமையற்றோன்.
இவரனைவரும் வயலையே பூஜித்து வயலாயினர்
நான் மெய்ப்பொருளைப் பூஜித்து மாயையகன்ற
நிலையில் இன்புற்றேன் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಗ = ಅಂತರಂಗ; ಅಮಳೋಕ್ಯ = ಮುಖ, ಮುಖಸೆಜ್ಜೆ, ಮುಖ ಸಂಪುಟ; ಇರವು = ಪರಮ ಅಸ್ತಿತ್ವವು, ನಿಷ್ಕಲಲಿಂಗವು; ಉತ್ತಮಾಂಗ = ಶಿರಸ್ಸು; ಕಕ್ಷೆ = ಕಂಕುಳ; ನಾನು = ಶರಣ; ಮಿಥ್ಯ = ಸಾಂಬಂಧಿಕ ಸತ್ಯ;
Written by: Sri Siddeswara Swamiji, Vijayapura