Index   ವಚನ - 5    Search  
 
ಕಾಯ ಧರ್ಮ ಕರ್ಮವನುಂಬನ್ನಕ್ಕ ಜೀವ ಭವಕ್ಕೆ ಬಪ್ಪುದು ತಪ್ಪದು. ಅದು ಕುಂಭದೊಳಗಣ ಜಲ ಹಿಂಗುವನ್ನಕ್ಕ ಹುಗಿಲವಾಯಿತ್ತು. ಕುಂಭ ಹೋಳಾಗಿ ಜಲ ನೆಲದಲ್ಲಿ ಹಿಂಗೆ, ಉಭಯದ ಬಂಥ ಬಿಟ್ಟಿತ್ತು. ಕಾಯ ಕರ್ಮವನರಿಯದೆ ಜೀವ ಭವವನುಣ್ಣದೆ, ಸರ್ಪನ ದವಡೆಯಲ್ಲಿ ಸಿಕ್ಕಿದ ಕಪ್ಪೆಯಂತೆ ಆ ವಿಷ ತಪ್ಪಿದ ಮತ್ತೆ ನೆಟ್ಟಹಲ್ಲೇನ ಮಾಡುವದು. ಇಂತೀ ಗುಣವ ತಪ್ಪೂದು, ತಪ್ಪಿ ಒಪ್ಪವನೊಪ್ಪಿದಲ್ಲಿ ಬಸವಣ್ಣಪ್ರಿಯ ನಾಗರೇಶ್ವರಲಿಂಗ ನಿಶ್ಚಿಂತನಾಗಿ.