Index   ವಚನ - 3    Search  
 
ಅಯ್ಯಾ ನಿಮ್ಮ ಶರಣರ ಇರವು, ಹರಿಯ ಕೈಯ ದೀವಿಗೆಯಂತೆ ಇದ್ದಿತ್ತಯ್ಯಾ. ನಿಮ್ಮ ಶರಣ ಸುಳುಹು, ಪವನನ ಕೈಯ ಪರಿಮಳದಂತೆ ಇದ್ದಿತ್ತಯ್ಯಾ. ಹುತಾಸನವೆಂಬ ಗದ್ದುಗೆಯ ಮೇಲೆ ಕರ್ಪುರದರಸುವಂ ಕುಳ್ಳಿರಿಸಲು, ಅರಸು ಗದ್ದುಗೆಯ ನುಂಗಿದನೊ ? ಗದ್ದುಗೆ ಅರಸನ ನುಂಗಿತ್ತೋ ? ಎಂಬ ನ್ಯಾಯದಲ್ಲಿ ಕಂಗಳ ಗದ್ದುಗೆಯ ಮೇಲೆ ಸದ್ಗುರು ಲಿಂಗವೆಂಬ ಅರಸನಂ ಕುಳ್ಳಿರಿಸಲು, ಆ ಲಿಂಗ ಕಂಗಳ ನುಂಗಿದನೊ ? ಕಂಗಳು ಲಿಂಗವನುಂಗಿ[ದವೊ]? ಈ ಉಭಯವ ನುಂಗಿದ ಬೆಡಗು ಬಿನ್ನಾಣವ, ನಿಜಗುರು ಭೋಗೇಶ್ವರಾ, ನಿಮ್ಮ ಶರಣದಲ್ಲಿ ಕಾಣಬಹುದು.