Index   ವಚನ - 1    Search  
 
ಅಂಗದ ಕ್ರೀಯೆ ಲಿಂಗದ ನಿಜ, ಲಿಂಗದ ನಿಜವೆ ಜಂಗಮ. ಆ ಜಂಗಮದ ಕ್ರೀಯೆಲ್ಲಾ ಲಿಂಗಮಯ. ಜಂಗಮದ ಸೇವೆಯೆ ಲಿಂಗದ ಕಳೆ. ಲಿಂಗದ ಕಳೆಯೆ ಜಂಗಮ, ಜಂಗಮದಿಂದೊದಗಿದುದೆ ಪ್ರಸಾದ. ಪ್ರಸಾದದೊದವೆ ಲಿಂಗೈಕ್ಯವು. ಈ ಗುರು, ನಾನು ನಿಜವ ಸಾಧಿಸಿದೆವು. ನಮ್ಮ ಕಲಿದೇವರದೇವನ ಬಸವಣ್ಣನಿಂದ ಕೇಳಯ್ಯಾ, ಚಂದಯ್ಯಾ.