Index   ವಚನ - 9    Search  
 
ಅಂಗೈಯ ಲಿಂಗ ಕಂಗಳ ನೋಟದಲ್ಲಿ ಅರತ ಲಿಂಗೈಕ್ಯನ, ಮನದ ಅರಿವು ನಿರ್ಭಾವದಲ್ಲಿ ಅರತ ಲಿಂಗೈಕ್ಯನ, ಸರ್ವಾಂಗನಿಷ್ಠೆ ನಿರ್ಣಯವಾದ ಲಿಂಗೈಕ್ಯನ, ನಿಜವನುಂಡು ತೃಪ್ತನಾದ ಲಿಂಗೈಕ್ಯನ, ಮಹವನವಗ್ರಹಿಸಿ ಘನವೇದ್ಯನಾದ ಲಿಂಗೈಕ್ಯನ, ಕಲಿದೇವರದೇವ ಪ್ರಭುವೆಂಬ ಲಿಂಗೈಕ್ಯನ ಶ್ರೀಪಾದದಲ್ಲಿ ಮಗ್ನನಾಗಿರ್ದೆನು.