Index   ವಚನ - 44    Search  
 
ಅಷ್ಟತನುವಿನ ನಿಷ್ಠಾಪರವ ಬಿಟ್ಟು, ಬಟ್ಟಬಯಲಲಿ ನಿಂದ ನಿಜವ ನೋಡಾ. ಹತ್ತೆಂಬ ಪ್ರಾಣವ ಸುತ್ತಿ ಸುಳಿಯಲೀಸದೆ ಬತ್ತಿ ಸುಟ್ಟು ಸಯವಾದ ಘನಚೈತನ್ಯವ ನೋಡಾ. ನಿಷ್ಠೆ ನಿಬ್ಬರ ತೊಟ್ಟುಬಿಟ್ಟು ಸಚ್ಚಿದಾನಂದವಾದ ಪರಿಯ ನೋಡಾ. ಕಲಿದೇವರದೇವನ ನಿಲುವಿಂಗೆ ನಮೋ ನಮೋ ಎನುತಿರ್ದೆನು.