Index   ವಚನ - 52    Search  
 
ಆಕಾರ ನಿರಾಕಾರವೆಂಬುದೊಂದಾದ ಭಕ್ತನನು ಆಕಾರವೆನಲುಬಾರದು, ನಿರಾಕಾರವೆನಲುಬಾರದು. ಸೂಕ್ಷ್ಮ ನಿಜಪದ ಏಕವಾದ ಭಕ್ತನು, ಘನಸಂಗಸಾರಾಯ ಜಂಗಮಸಂಗಸಾರಾಯ ಪ್ರಸಾದಸಂಗಸಾರಾಯ ಜ್ಞಾನಸಂಗಸಾರಾಯ ಅನುಭವಸಂಗಸಾರಾಯ. ಅಂತಪ್ಪ ಭಕ್ತ ತಾನಾದ ಕಲಿದೇವಯ್ಯ.