Index   ವಚನ - 60    Search  
 
ಆದಿಯಲ್ಲಿ ನಿಮ್ಮ, ಜಂಗಮವೆಂಬುದನಾರುಬಲ್ಲರಯ್ಯಾ, ಬಸವಣ್ಣನಲ್ಲದೆ ? ಎಲ್ಲಿ ಸ್ಥಾವರವಲ್ಲಿ ನೋಡಲಾಗದು. ಮನದಲ್ಲಿ ನೆನೆಯಲಾಗದು. ಲಿಂಗಕಾದಡೆಯೂ ಜಂಗಮವೆ ಬೇಕು. ಜಂಗಮವಿಲ್ಲದೆ ಲಿಂಗವುಂಟೆ ? ಗುರುವಿಂಗಾದಡೆಯೂ ಜಂಗಮವೆ ಬೇಕು. ಜಂಗಮವಿಲ್ಲದೆ ಗುರುವುಂಟೆ? ಎಲ್ಲಿ ಜಂಗಮವಿರ್ದಡಲ್ಲಿಯೇ ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಅನುಭಾವ ಸನ್ನಿಹಿತವಾಗಿಹುದು. ಇಂತೀ ಜಂಗಮವೇ ಲಿಂಗವೆಂಬುದ ಬಸವಣ್ಣ ಬಲ್ಲ. ಆ ಬಸವಣ್ಣನ ಶ್ರೀಪಾದಕ್ಕೆ ಅಹೋರಾತ್ರಿ ಶರಣೆಂದು ಶುದ್ಧನಾದೆ ಕಾಣಾ, ಕಲಿದೇವರದೇವಯ್ಯ.